Vadhu Serial: ಈ ಡಿವೋರ್ಸ್ ಕೇಸ್ ಸೀರಿಯಲ್ ಮುಗಿಯೋವರೆಗೂ ಮುಗಿಯಲ್ಲ

Sampriya

ಶುಕ್ರವಾರ, 7 ಮಾರ್ಚ್ 2025 (20:05 IST)
Photo Courtesy X
ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ಶುರುವಾದ ಸೀರಿಯಲ್ ವಧು. ತನ್ನ ಪ್ರೋಮೋದ ಮೂಲಕ ಭಾರೀ ಕ್ರೇಜ್ ಹುಟ್ಟುಹಾಕಿದ ವಧು ಸೀರಿಯಲ್, ಈಗಾಗಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ನಾಯಕನ ಡಿವೋರ್ಸ್ ಮೂಲಕ ಶುರುವಾದ ಕಥೆಗೆ ಸಾರ್ಥಕ್‌ಗೆ  ವಕೀಲೆಯಾಗಿ ನಾಯಕಿ ವಧು ನೇಮಕವಾಗಿದ್ದಾಳೆ. ಅಮ್ಮನಿಗೆ ಆಘಾತವಾಗದ ಹಾಗೇ ಪ್ರಿಯಾಂಕಾಳ ಇಚ್ಛೆಯಂತೆ ವಿಚ್ಛೇಧನ ನೀಡಲು ಸಾರ್ಥಕ್ ಪರದಾಡುತ್ತಿದ್ದಾನೆ.

ಇದೀಗ ಶೇರಿಂಗ್‌ ವಿಚಾರದಲ್ಲಿ ಸಾರ್ಥಕ್ ಹಾಗೂ ಪ್ರಿಯಾಂಕಾ ಮಧ್ಯೆ ಜಟಾಪಟಿ ನಡೆಯುತ್ತಿದೆ. ಒಟ್ಟಾರೆ ಕಥೆ ವಿಚ್ಛೇಧನದ ಸುತ್ತವೇ ನಡೆಯುತ್ತಿದೆ. ಇಂದಿನ ಪ್ರೋಮೋ ನೋಡಿದವರು ಈ ಡಿವೋರ್ಸ್ ಕೇಸ್ ಸೀರಿಯಲ್ ಮುಗಿಯೋವರೆಗೂ ಮುಗಿಯಲ್ಲ ಎಂದು ಪ್ರೇಕ್ಷಕರೊಬ್ಬರು ನಿರಾಸೆ ವ್ಯಕ್ತಪಡಿಸಿದ್ದಾರೆ.

 ಮತ್ತೊಬ್ಬರು ಈ ವಿಚ್ಛೇಧನದಿಂದ ಪ್ರಿಯಾಂಕಾಗೆ ಸಿಗುವುದು ಬರೀ ಚಿಪ್ಪು ಎಂದು ಕಮೆಂಟ್ ಮಾಡಿದ್ದಾರೆ.  ಇನ್ನೊಬ್ಬರು ಯಾವಾಗಿದ್ರು ಗೊತ್ತಾಗಲೇ ಬೇಕು ಹೋಗಿ ಹೇಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ