ಇಂದು ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಟ್ರಾಂಗ್ ಸ್ಪರ್ಧಿ ಇವರೇ

Sampriya

ಭಾನುವಾರ, 19 ಜನವರಿ 2025 (16:24 IST)
Photo Courtesy X
ಫೈನಲ್‌ನಲ್ಲಿ ಇರಬೇಕಿದ್ದ ಸ್ಟ್ರಾಂಗ್ ಸ್ಪರ್ಧಿ ಇದೀಗ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಾರದ ಎಪಿಸೋಡ್ ಆರಂಭದಲ್ಲೇ ಸುದೀಪ್ ಅವರು ಡಬಲ್ ಎಲಿಮಿನೇಷನ್ ಶಾಕ್ ನೀಡಿದ್ದರು. ಇನ್ನೂ ಗೌತಮಿ ಅವರು ಶನಿವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಧನರಾಜ್ ಅವರು ಇಂದು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇದು ಎಷ್ಟು ಸತ್ಯ ಎಂದು ಇಂದಿನ ಎಪಿಸೋಡ್‌ನಲ್ಲಿ ತಿಳಿದುಬರಬೇಕಿದೆ.

ಗೆಳೆಯ ಹನಮಂತು ಜೋಡಿ ಮೋಡಿ ಮಾಡಿದ್ದ ಧನರಾಜ್ ಅವರು ಫೈನಲ್‌ಗೆ ಪ್ರವೇಶ ಮಾಡುತ್ತಾರೆಂಬ ಭರವಸೆ ಇತ್ತು. ತನ್ನ ವ್ಯಕ್ತಿತ್ವದ ಮೂಲಕನೇ ಕನ್ನಡಿಗರ ಮನಸ್ಸನ್ನು ಗೆದ್ದಿದ್ದ ಧನರಾಜ್, ಮನರಂಜನೆ ಜತೆಗೆ ಟಾಸ್ಕ್‌ನಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

ಇದೀಗ ಕಳೆದ ವಾರದಲ್ಲಿ ಧನರಾಜ್ ಕಡೆಯಿಂದ ನಡೆದ ತಪ್ಪು ಅವರನ್ನು ಮನೆಯಿಂದ ಹೊರಬರುವಂತೆ ಮಾಡಿದೆ ಎಂದು ಬಿಗ್‌ಬಾಸ್ ಪ್ರಿಯರು ಲೆಕ್ಕಚಾರ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ