ಒಳ್ಳೆ ನಿರ್ಧಾರ, ಮುಂದೆ ಹೋಗ್ಲಿ ಕತೆ: ಭಾಗ್ಯಳ ನಿರ್ಧಾರಕ್ಕೆ ವೀಕ್ಷಕರು ಫಿದಾ

Sampriya

ಸೋಮವಾರ, 24 ಫೆಬ್ರವರಿ 2025 (15:09 IST)
Photo Courtesy X
ಬೆಂಗಳೂರು: ತಾಂಡವ್‌ನನ್ನು ಹೇಗಾದರೂ ಮಾಡಿ ಮದುವೆಯಾಗಬೇಕೆಂದು ಶ್ರೇಷ್ಠಾ ಕಣ್ಣೀರಿನ ನಾಟಕವಾಡಿ, ಮದುವೆಗೆ ಸಜ್ಜು ಮಾಡಿದ್ದಾಳೆ. ಇದೀಗ ಎಲ್ಲರಲ್ಲಿ ಶ್ರೇಷ್ಠ ಮತ್ತು ತಾಂಡವ್ ಮತ್ತೇ ಮದುವೆ ಆಗುತ್ತೋ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಗಂಡನ ನಡವಳಿಕೆ, ಅವಮಾನಕ್ಕೆ ಬೇಸತ್ತ ಭಾಗ್ಯಾ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾಳೆ.

ಕಟ್ಟಿರುವ ತಾಳಿಗೆ ಗಂಡನ ಬೆಲೆ ಕೊಡದಿದ್ದರೆ ಏನು ಪ್ರಯೋಜನ. ಈ ತಾಳಿ ಸರಪಳಿಯಾಗಿ, ಭಾರವಾಗುತ್ತಿದೆ. ಅತ್ತೆ ಬಳಿ ಗಂಡನಾ ಎದುರೇ ಈ ತಾಳಿಯನ್ನು ತೆಗೆಯುತ್ತೇನೆ ಎಂದು ಭಾಗ್ಯ ಹೇಳಿದಾಗ ಕುಸುಮಾ ತಾಳಿ ತೆಗೆಯುವಂತೆ ಹೇಳುತ್ತಾಳೆ.

ಒಟ್ಟಾರೆ ಇಂದಿನ ಎಪಿಸೋಡ್ ಸೂಪರ್ ಆಗಿದೆ ಎಂದು ಪ್ರೋಮೋ ನೋಡಿದ ವೀಕ್ಷಕರು ಲೆಕ್ಕಾಚಾರ ಹಾಕಿದ್ದಾರೆ.  ಭಾಗ್ಯಳ ಈ ನಿರ್ಧಾರಕ್ಕೆ ಪ್ರೇಕ್ಷಕರು ಸೂಪರ್ ಎಂದಿದ್ದಾರೆ. ಕೊನೆಗೂ ಇಂತ ನಿರ್ಧಾರ ತಗೊಂಡಿದ್ದು ಒಳ್ಳೆಯದಾಯ್ತು ಭಾಗ್ಯ ಮುಂದೆ ಎಲ್ಲ ಒಳ್ಳೇದೇ ಆಗುತ್ತೆ ಎಂದು ಬೆಂಬಲ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ