‘ಅಗ್ನಿಸಾಕ್ಷಿ’ ಸನ್ನಿಧಿ ಹೊಸ ಸಿನಿಮಾಗೆ ವಿಶಿಷ್ಟ ಟೈಟಲ್

ಮಂಗಳವಾರ, 17 ಮಾರ್ಚ್ 2020 (10:07 IST)
ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿ ಮೂಲಕ ಖ್ಯಾತರಾಗಿದ್ದ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಓದಿರುತ್ತೀರಿ.


ಈಗ ಆ ಸಿನಿಮಾ ಯಾವುದು ಎಂಬ ಮಾಹಿತಿ ಹೊರಬಿದ್ದಿದೆ. ವೈಷ್ಣವಿ ಹೊಸ ಸಿನಿಮಾ ‘ಬಹುಕೃತ ವೇಷಂ’ ಎಂದಾಗಿದೆ. ಇದರಲ್ಲಿ ಮಧ್ಯಮ ವರ್ಗದ ಹುಡುಗಿಯ ಪಾತ್ರ ಮಾಡುತ್ತಿದ್ದಾರಂತೆ ವೈಷ್ಣವಿ.

ಈಗಾಗಲೇ ಕೆಲವು ದಿನಗಳ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಅಂದ ಹಾಗೆ ಇದು ವೈಷ್ಣವಿಗೆ ಎರಡನೇ ಸಿನಿಮಾ. ಇದಕ್ಕೂ ಮೊದಲು ‘ಗಿರಿಗಿಟ್ಲೆ’ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ