ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರಿಪ್ರಿಯಾ, ವಸಿಷ್ಠ ಸಿಂಹ

Krishnaveni K

ಶುಕ್ರವಾರ, 1 ನವೆಂಬರ್ 2024 (14:03 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ ದೀಪಾವಳಿ ಹಬ್ಬದ ಸಂದರ್ಭದಲ್ಲೇ ಸಿಹಿ ಸುದ್ದಿ ಕೊಟ್ಟಿದ್ದಾರೆ. ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹರಿಪ್ರಿಯಾ ಜನ್ಮದಿನವಿತ್ತು. ಈ ಹಿನ್ನಲೆಯಲ್ಲಿ ದಂಪತಿ ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಈ ನಡುವೆಯೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹರಿಪ್ರಿಯಾ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಈ ಜೋಡಿ ಜೀವ ಮಾಲ್ಡೀವ್ಸ್ ನಲ್ಲಿ ಬೇಬಿ ಮೂನ್ ಮಾಡಿಕೊಂಡಿದ್ದು, ನವಂಬರ್ 1 ರ ರಾಜ್ಯೋತ್ಸವದಂದೇ ವಿಶೇಷ ಸುದ್ದಿ ಹಂಚಿಕೊಂಡಿದ್ದಾರೆ. 2023 ರಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಬಹುಕಾಲದ ಪ್ರೀತಿಗೆ ದಾಂಪತ್ಯದ ಮುದ್ರೆಯೊತ್ತಿದ್ದರು. ಇದೀಗ ಮೊದಲ ಮಗುವಿನ ಸುದ್ದಿ ಕೊಟ್ಟಿದ್ದಾರೆ.

ಮದುವೆ ಬಳಿಕ ಹರಿಪ್ರಿಯಾ ಸಿನಿಮಾಗಳಿಂದ ದೂರವುಳಿದಿದ್ದರು. ಕೆಲವು ಸಮಯದ ಹಿಂದೆ ಗರ್ಭಿಣಿಯಾಗಿರಬಹುದೇ ಎಂಬ ಸುದ್ದಿ ಹರಿದಾಡಿತ್ತು. ಆದರೆ ಆಗ ದಂಪತಿ ಅದನ್ನು ಅಲ್ಲಗಳೆದಿದ್ದರು. ಇದೀಗ ಅಧಿಕೃತವಾಗಿಯೇ ತಮ್ಮ ಜೀವನ ಮಹತ್ವದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ