ಡಾಲಿ ಧನಂಜಯ ಜೊತೆಗೆ ನಟಿ ಅಮೃತಾ ಅಯ್ಯಂಗಾರ್ ಹೆಸರು ಥಳುಕು ಹಾಕಿಕೊಂಡಿದ್ದು ಇದೆ. ಆದರೆ ಇಬ್ಬರೂ ತಮ್ಮಿಬ್ಬರ ನಡುವೆ ಇರುವುದು ಬರೀ ಸ್ನೇಹ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ತಮ್ಮ ರಿಯಲ್ ಲೈಫ್ ಜೋಡಿಯನ್ನು ಪರಿಚಯಿಸಿರುವ ಧನಂಜಯ ಎಲ್ಲಾ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಮೈಸೂರಿನಲ್ಲಿಯೇ ಇಬ್ಬರೂ ವಿವಾಹವಾಗಲಿದ್ದಾರೆ.