ಖಳ ನಟ ವಜ್ರಮುನಿಗೆ ತಕ್ಕ ಗೌರವ ನೀಡುತ್ತಿದ್ದಾರೆ ನಟ ವಸಿಷ್ಠ ಸಿಂಹ
ಬುಧವಾರ, 23 ಅಕ್ಟೋಬರ್ 2019 (11:21 IST)
ಬೆಂಗಳೂರು: ನಟ ವಸಿಷ್ಠ ಸಿಂಹ ಇತ್ತೀಚೆಗಷ್ಟೇ ಖ್ಯಾತ ಖಳ ನಟ ದಿವಂಗತ ವಜ್ರವಮುನಿಯವರ ಅಭಿಮಾನಿ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ವಸಿಷ್ಠ ಸಿಂಹ ಕನ್ನಡ ಕಂಡ ಶ‍್ರೇಷ್ಠ ಖಳ ನಟನಿಗೆ ತಕ್ಕ ಗೌರವ ಸಲ್ಲಿಸಲು ಹೊರಟಿದ್ದಾರೆ.
ವಸಿಷ್ಠ ಸಿಂಹ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇದರಲ್ಲಿ ವಜ್ರಮುನಿ ಅಭಿಮಾನಿಯ ಪಾತ್ರ ಮಾಡುತ್ತಿದ್ದಾರೆ. ಈ ಮೂಲಕ ವಜ್ರಮುನಿಗೆ ಗೌರವ ಸಲ್ಲಿಸಲು ಹೊರಟಿದ್ದಾರೆ.
ಸ್ವತಃ ವಜ್ರಮುನಿಯ ಅಪ್ಪಟ ಅಭಿಮಾನಿಯಾಗಿರುವುದರಿಂದ ಈ ಸಿನಿಮಾದಲ್ಲಿ ಪಾತ್ರ ಮಾಡುವುದೂ ಸುಲಭವಾಗಲಿದೆ ಎಂಬ ನಂಬಿಕೆ ಸಿಂಹರದ್ದು. ಮರ್ಯಾದಸ್ಥ ಎಂದು ಈ ಸಿನಿಮಾಗೆ ಹೆಸರಿಡಲಾಗಿದ್ದು, ಮಹೇಶ್ ಕೃಷ್ಣ ನಿರ್ದೇಶಕರು.