ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಗಲಿದೆ ಈ ಗಿಫ್ಟ್

ಶುಕ್ರವಾರ, 24 ಜನವರಿ 2020 (10:46 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಈಗಾಗಲೇ ಅಭಿಮಾನಿಗಳು ತಯಾರಿ ನಡೆಸಿದ್ದು, ಇಂತಿಪ್ಪ ಅಭಿಮಾನಿಗಳಿಗೆ ಡಿ ಬಾಸ್ ಕಡೆಯಿಂದ ಭರ್ಜರಿ ಉಡುಗೊರೆ ಸಿಗಲಿದೆ.


ರಾಬರ್ಟ್ ಬಳಿಕ ದರ್ಶನ್ ಅಭಿನಯಿಸಲಿರುವ ಸಿನಿಮಾ ‘ವೀರ ಮದಕರಿ’. ಈ ಐತಿಹಾಸಿಕ ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಇದಕ್ಕಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿಶೇಷ ಸೆಟ್ ಸಿದ್ಧಪಡಿಸಿದ್ದಾರೆ.

ಈ ಬಾರಿ ದರ್ಶನ್ ಬರ್ತ್ ಡೇ ದಿನ ಅಂದರೆ ಫೆಬ್ರವರಿ 16 ರಂದು ಅಭಿಮಾನಿಗಳಿಗೆ ಈ ಸಿನಿಮಾದ ಮೋಷನ್ ಪೋಸ್ಟರ್ ಲಾಂಚ್ ಮಾಡಿ ಉಡುಗೊರೆ ನೀಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಬಾರಿಯೂ ದರ್ಶನ್ ಕೇಕ್, ಹಾರ ತುರಾಯಿ ಇಲ್ಲದೇ ಅಭಿಮಾನಿಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಹಂಚಲು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ