ನಿಖಿಲ್ ಕುಮಾರಸ್ವಾಮಿ ಈಗ ಕ್ರೀಡಾಪಟು!

ಗುರುವಾರ, 23 ಜನವರಿ 2020 (08:50 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವೊಂದರ ಮೂಲಕ ಪಕ್ಕಾ ಸ್ಪೋರ್ಟ್ಸ್‍ ಮ್ಯಾನ್ ಆಗುತ್ತಿದ್ದಾರೆ. ನಿನ್ನೆ ಅವರ ಬರ್ತ್ ಡೇ ದಿನ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.


ಲಹರಿ ಮ್ಯೂಸಿಕ್ ಅವರ ಚೊಚ್ಚಲ ನಿರ್ಮಾಣದ ಸಿನಿಮಾದಲ್ಲಿ ನಿಖಿಲ್ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ.

ಇದಲ್ಲದೆ ‘ಧನುಷ್ ಐಪಿಎಸ್’ ಎನ್ನುವ ಆಕ್ಷನ್ ಸಿನಿಮಾವೂ ಘೋಷಣೆಯಾಗಿದೆ. ಮುನಿರತ್ನ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಇದಲ್ಲದೆ ಪೈಲ್ವಾನ್ ಸಿನಿಮಾ ಖ್ಯಾತಿಯ ಕೃಷ್ಣ ನಿರ್ದೇಶನದಲ್ಲಿ ನಿಖಿಲ್ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಈ ವರ್ಷ ನಿಖಿಲ್ ಬ್ಯುಸಿಯಾಗಿರಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ