ಹಿರಿಯ ನಟಿ ಹೇಮಾ ಚೌಧರಿ ಸ್ಥಿತಿ ಗಂಭೀರ: ಐಸಿಯುವಿಗೆ ದಾಖಲು
ಬ್ರೈನ್ ಹೆಮರೇಜ್ ಗೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹ ಚಿಕಿತ್ಸೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಸದ್ಯಕ್ಕೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೊನ್ನೆಯಷ್ಟೇ ಹಿರಿಯ ನಟಿ ಲೀಲಾವತಿ ಅವರ 11 ನೇ ದಿನದ ಕಾರ್ಯಕದಲ್ಲಿ ಹೇಮಾ ಚೌಧರಿ ಭಾಗಿಯಾಗಿದ್ದರು. ಈ ವೇಳೆ ಲೀಲಾವತಿ ಸೊಸೆ, ಕುಟುಂಬಸ್ಥರ ಜೊತೆ ಆರಾಮವಾಗಿ ಮಾತನಾಡಿಕೊಂಡಿದ್ದರು. ಆದರೆ ಈಗ ಏಕಾಏಕಿ ಈ ಪರಿಸ್ಥಿತಿಯಾಗಿದೆ.
ಹೇಮಾವತಿ ಪುತ್ರ ವಿದೇಶದಲ್ಲಿದ್ದು, ಅವರ ಆಗಮನಕ್ಕಾಗಿ ಕುಟುಂಬ ವರ್ಗದವರು ಕಾಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.