ಲೈಗರ್ ಸಂಭಾವನೆ ತ್ಯಾಗ ಮಾಡಲು ಮುಂದಾದ ವಿಜಯ್ ದೇವರಕೊಂಡ
ಲೈಗರ್ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ದಯನೀಯ ಸೋಲು ಕಂಡಿದೆ. ಕೇವಲ ಶೇ.65 ಹಣ ಮಾತ್ರ ಬಂದಿದೆ. ಇದರಿಂದ ವಿತರಕರಿಗೆ ತೀವ್ರ ನಷ್ಟವಾಗಿದೆ.
ಹೀಗಾಗಿ ವಿತರಕರಿಗಾದ ನಷ್ಟ ತುಂಬಿಕೊಡಲು ನಿರ್ಮಾಪಕ, ನಿರ್ದೇಶಕ ಪುರಿ ಜಗನ್ನಾಥ್ ಮುಂದಾಗಿದ್ದಾರೆ. ಅವರಿಗೆ ಕೈ ಜೋಡಿಸಲಿರುವ ವಿಜಯ್ ದೇವರಕೊಂಡ ಕೂಡಾ ತಮ್ಮ ಸಂಭಾವನೆಯಲ್ಲಿ ಬಹುಪಾಲನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.