ತಂದೆಯಿಂದಲೇ ವಿಜಯ್ ಹೀರೋ ಆದ್ರಾ? ಈ ಬಗ್ಗೆ ವಿಜಯ್ ಹೇಳಿದ್ದೇನು?

ಶುಕ್ರವಾರ, 25 ಡಿಸೆಂಬರ್ 2020 (10:36 IST)
ಚೆನ್ನೈ : ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಟ. ಇವರು ಬಹುಬೇಡಿಕೆಯ ನಟನಾಗಿದ್ದು, ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಆದರೆ ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ ‘ನಾಳೆಯ ತೀರ್ಪು’ ಚಿತ್ರದ ಮೂಲಕ ನಟ ವಿಜಯ್ ನಾಯಕನಾಗಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಾಗಾಗಿ ವಿಜಯ್ ತಂದೆಯಿಂದಲೇ ಹೀರೋ ಆದರು ಎಂಬ ಮಾತು ಕೇಳಿಬಂದಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ವಿಜಯ್, ನಾನು ಖಂಡಿತವಾಗಿಯೂ ಚಿತ್ರರಂಗದಲ್ಲಿ ನಾಯಕನಾಗುತ್ತೇನೆಂಬ ಭರವಸೆ ಇತ್ತು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ