ಅನಿಲ್ ಕುಂಬ್ಳೆಗಾಗಿ ಎರಡನೇ ಬಾರಿಗೆ ಕಾಂತಾರ ವೀಕ್ಷಿಸಿದ ಗಾಯಕ ವಿಜಯ್ ಪ್ರಕಾಶ್

ಮಂಗಳವಾರ, 11 ಅಕ್ಟೋಬರ್ 2022 (16:09 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ ಭರ್ಜರಿ ಸೌಂಡು ಮಾಡುತ್ತಿದೆ.

ಕುಟುಂಬ ಸಮೇತರಾಗಿ ಬಂದು ಥಿಯೇಟರ್ ನಲ್ಲಿ ಚಿತ್ರ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳೂ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ.

ಇದೀಗ ಕ್ರಿಕೆಟಿಗ ಅನಿಲ್ ಕುಂಬ್ಳೆ ತಮ್ಮ ಕುಟುಂಬ ಸಮೇತರಾಗಿ ಕಾಂತಾರ ವೀಕ್ಷಿಸಿದ್ದಾರೆ. ಅನಿಲ್ ಕುಂಬ್ಳೆಗಾಗಿ ಸ್ನೇಹಿತ, ಗಾಯಕ ವಿಜಯ್ ಪ್ರಕಾಶ್ ಎರಡನೇ ಬಾರಿಗೆ ಕಾಂತಾರ ವೀಕ್ಷಿಸಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ವಿಕ್ರಾಂತ್ ರೋಣ ಸಿನಿಮಾ ನೋಡಿ ಹೊಗಳಿದ್ದರು. ಈಗ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ