ವಿಜಯ್ ರಾಘವೇಂದ್ರ 50 ನೇ ಸಿನಿಮಾ ರಿಲೀಸ್ ಇಂದು

ಭಾನುವಾರ, 15 ಆಗಸ್ಟ್ 2021 (16:25 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಸಿನಿಮಾ ಜೀವನದಲ್ಲಿ ಮೈಲುಗಲ್ಲಾಗಿರುವ ಸೀತಾರಾಮ್ ಬಿನೋಯ್ ಇಂದು ರಿಲೀಸ್ ಆಗುತ್ತಿದೆ.


ಆದರೆ ಥಿಯೇಟರ್ ಗಿಂತ ಮೊದಲು ಕಿರುತೆರೆಯಲ್ಲಿ ರಿಲೀಸ್ ಆಗುವ ಮೂಲಕ ಈ ಸಿನಿಮಾ ಹೊಸ ದಾಖಲೆ ಮಾಡಲಿದೆ. ಇದು ವಿಜಯ್ ರಾಘವೇಂದ್ರ ಅವರ 50 ನೇ ಸಿನಿಮಾ ಎನ್ನುವುದು ವಿಶೇಷ.

ಇಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸಿನಿಮಾ ಸಂಜೆ 6 ಗಂಟೆಗೆ ತೆರೆ ಕಾಣುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದವಿರುವ ಈ ಸಿನಿಮಾವನ್ನು ಮನೆ ಮಂದಿಯೆಲ್ಲಾ ಕೂತ ಎಂಜಾಯ್ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ