ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿನ್ನೆ ತಮ್ಮ ಅತ್ತೆ ಮೀನಾ ತೂಗುದೀಪ ಹುಟ್ಟುಹಬ್ಬಕ್ಕೆ ಫೋಟೋವೊಂದನ್ನು ಪ್ರಕಟಿಸಿದ್ದು ಇದನ್ನು ನೋಡಿದರೆ ನಮ್ಮತ್ತೆಗೆ ನಾವಿಬ್ರೇ ಸೊಸೆಯಂದಿರು ಎಂದು ಸಖತ್ ಟಾಂಗ್ ಕೊಟ್ಟಂತಿದೆ.
ನಿನ್ನೆ ದರ್ಶನ್ ತಾಯಿ ಮೀನಾ ತೂಗುದೀಪ ಹುಟ್ಟುಹಬ್ಬವಿತ್ತು. ತಮ್ಮ ಅತ್ತೆಯ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮಿ ಫೋಟೋವೊಂದನ್ನು ಪ್ರಕಟಿಸಿದ್ದರು. ಈ ಫೋಟೋದಲ್ಲಿ ತಮ್ಮ ಅತ್ತೆಯ ಜೊತೆಗೆ ತಾನು ಮತ್ತು ದಿನಕರ್ ತೂಗುದೀಪ ಪತ್ನಿ ನಿಂತಿರುವ ಫೋಟೋವಿತ್ತು.
ಈ ಮೂಲಕ ನಮ್ಮ ಅತ್ತೆಗೆ ನಾವಿಬ್ಬರೇ ಸೊಸೆಯಂದಿರು, ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಪವಿತ್ರಾ ಗೌಡಗೆ ವಿಜಯಲಕ್ಷ್ಮಿ ಸಂದೇಶ ಕೊಟ್ಟಂತಿತ್ತು. ನಿನ್ನೆಯಷ್ಟೇ ದರ್ಶನ್ ರನ್ನು ಕೋರ್ಟ್ ನಲ್ಲಿ ಭೇಟಿಯಾಗಿದ್ದ ಪವಿತ್ರಾ ಗೌಡ ಹಠ ಹಿಡಿದು ಫೋನ್ ನಂಬರ್ ಪಡೆದುಕೊಂಡರು ಎಂಬ ಸುದ್ದಿಯಿತ್ತು.
ಇದಕ್ಕೆ ಮೊದಲೇ ವಿಜಯಲಕ್ಷ್ಮಿ ತಮ್ಮ ಅತ್ತೆ ಜೊತೆಗಿರುವ ಫೋಟೋ ಪ್ರಕಟಿಸಿದ್ದರು. ಈ ಮೂಲಕ ನಮ್ಮ ಕುಟುಂಬದಲ್ಲಿ ಮೂರನೆಯವರಿಗೆ ಅವಕಾಶವಿಲ್ಲ ಎಂದು ತೋರಿಸಿಕೊಟ್ಟಂತಿದೆ.