ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ನಟಿಸಲಿರುವ ವಿಜಯ್ ಸೇತುಪತಿ

ಸೋಮವಾರ, 18 ಜನವರಿ 2021 (13:25 IST)
ಚೆನ್ನೈ : ಹಿಟ್ ತಮಿಳು ಚಿತ್ರ ‘ಮನಗರಂ’ ಹಿಂದಿಗೆ ರಿಮೇಕ್ ಆಗಲಿದ್ದು, ಆ ಮೂಲಕ ತಮಿಳು ನಟ ವಿಜಯ್ ಸೇತುಪತಿ ಅವರು ಮತ್ತೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರಂತೆ.

ಈ ಚಿತ್ರಕ್ಕೆ ‘ಮುಂಬೈಕರ್’ ಎಂದು ಶೀರ್ಷಿಕೆ ಇಡಲಾಗಿದ್ದು, ಆ ಮೂಲಕ ಶ್ರೀರಾಮ್ ರಾಘವನ್ ಅವರೊಂದಿಗೆ ವಿಜಯ್ ಸೇತುಪತಿ ಚಿತ್ರ ಮಾಡಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ವಿಜಯ್ ಸೇತುಪತಿ ಅವರ ಹುಟ್ಟುಹಬ್ಬದಿನದಂದು ಅವರು ಕಿಶೋರ್ ಪಾಂಡುರಂಗ್ ಬೆಲೆಕರ್ ನಿರ್ದೇಶನದ ಬಾಲಿವುಡ್ ನ ಚಿತ್ರವೊಂದನ್ನು ಮಾಡಲಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಇದು ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತುಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ