ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ-ತಮಿಳು ಸ್ಟಾರ್ ನಟ ವಿಕ್ರಂ

ಸೋಮವಾರ, 4 ಜನವರಿ 2021 (09:42 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ತಮಿಳುನಟ ವಿಕ್ರಂ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಇದು ಅಭಿಮಾನಿಗಳಿಗೆ ಭಾರೀ ಖುಷಿಕೊಟ್ಟಿದೆ.


ವಿಕ್ರಂ-ಶಿವಣ್ಣ ಜೊತೆಯಾಗಿ ನಟಿಸಲಿರುವ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಮೂಡಿಬರಲಿದೆ. ಈ ಮೂಲಕ ಶಿವಣ್ಣ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಗೆ ಕಾರ್ತಿಕ್ ಸುಬ್ಬರಾಜು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಪ್ರೊಡಕ್ಷನ್ ಹೌಸ್ ಅಧಿಕೃತವಾಗಿ ಪ್ರಕಟಣೆ ನೀಡಲಿದೆ. ಒಂದು ವೇಳೆ ಇದು ನಿಜವಾದರೆ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ