200 ಕೋಟಿ ಗಳಿಕೆ ತಲುಪಿದ ವಿಕ್ರಾಂತ್ ರೋಣ: ಇಂದು ರಕ್ಕಮ್ಮ ವಿಡಿಯೋ ಸಾಂಗ್ ರಿಲೀಸ್
ಇದರೊಂದಿಗೆ ಚಿತ್ರ ಈಗ ಮತ್ತೊಂದು ಬ್ಲಾಕ್ ಬ್ಲಸ್ಟರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಕೆಜಿಎಫ್, ಚಾರ್ಲಿ ಬಳಿಕ ಕನ್ನಡದ ಮತ್ತೊಂದು ಬಹುಭಾಷಾ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಂತಾಗಿದೆ.
ಇದೇ ಖುಷಿಯಲ್ಲಿ ಇಂದು ವಿಕ್ರಾಂತ್ ರೋಣ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯಿದೆ. ಇಂದು ರಾ ರಾ ರಕ್ಕಮ್ಮ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ. ಇಂದು ಸಂಜೆ 4.05 ಕ್ಕೆ ಹಾಡು ಲಾಂಚ್ ಆಗಲಿದೆ.