ವಿಕ್ರಾಂತ್ ರೋಣ ಟ್ರೈಲರ್ ಗೆ ದಾಖಲೆಯ ರೆಸ್ಪಾನ್ಸ್
ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಿದೆ. 17 ಗಂಟೆಗಳ ಅವಧಿಯಲ್ಲಿ ಕೇವಲ ಕನ್ನಡ ಅವತರಣಿಕೆಯ ಟ್ರೈಲರ್ 60 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ತೆಲುಗಿನಲ್ಲಿ 30 ಲಕ್ಷ, ಮಲಯಾಳಂನಲ್ಲಿ 10 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಟ್ರೈಲರ್ ವೀಕ್ಷಣೆ ಮಾಡಿದವರೆಲ್ಲರೂ ಉತ್ತಮ ಅಭಿಪ್ರಾಯವನ್ನೇ ನೀಡಿದ್ದಾರೆ. ಇದೀಗ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ.