ದುಬೈನಲ್ಲಿ ಅಭಿಮಾನಿಗಳ ಜೊತೆ ಚಾರ್ಲಿ ತಂಡ
ದುಬೈನ ಸಿಟಿ ಸೆಂಟರ್ ದೇರಾನಲ್ಲಿ ಈವತ್ತು ಸಂಜೆ 7 ಗಂಟೆಗೆ 777 ಚಾರ್ಲಿ ವಿಶೇಷ ಪ್ರದರ್ಶನ ಏರ್ಪಾಡಾಗಿದೆ. ಈ ಶೋನಲ್ಲಿ ಚಾರ್ಲಿ ತಂಡ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸಲಿದೆ.
ಇದಕ್ಕಾಗಿ ಇಡೀ ಚಿತ್ರತಂಡ ನಿನ್ನೆಯೇ ದುಬೈಗೆ ತೆರಳಿತ್ತು. ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ವಿದೇಶದಲ್ಲಿರುವ ಪ್ರೇಕ್ಷಕರನ್ನು ಭೇಟಿ ಮಾಡಲು ಚಿತ್ರತಂಡ ಮುಂದಾಗಿದೆ.