ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಶುರುವಾಗಿ ಎರಡನೇ ದಿನದಲ್ಲೇ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಜಗಳ ನಡೆದಿತ್ತು. ಇದೀಗ ಗಿಲ್ಲಿ, ಅಶ್ವಿನಿ ಗೌಡರನ್ನು ಬಿಗ್‌ಬಾಸ್ ಮನೆಯಲ್ಲಿ ಕಾಲೆಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಜೋಡಿಯ ತರಲೆ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲ ವರ್ಷಗಳ ಹಿಂದೆ ಸೂಪರ್ ಹಿಟ್ ಸಿನಿಮಾವಾದ ರಾಜಾಹುಲಿ ಸಿನಿಮಾದಲ್ಲಿ ಅಶ್ವಿನಿ ಅವರು ಯಶ್‌ಗೆ ಅತ್ತೆ ಮಗಳಾಗಿ ನಟಿಸಿದ್ದರು. ಅದರಲ್ಲಿ ಯಶ್, ನಮ್ಮ ಅತ್ತೆ ಮಗಳಿಗೆ ಕೊನೆಯವರೆಗೂ ಕಣ್ಣು ಹೊಡೆಯುತ್ತಲೇ ಇರುವುದು, ನಮ್ಮನ್ನು ಯಾರೂ ತಡೆಯೋರು ಎಂದು ಡೈಲಾಗ್ ಹೊಡೆದಿದ್ದರು. ಈ ಡೈಲಾಗ್ ಭಾರೀ ಸದ್ದು ಮಾಡಿತ್ತು.
ಇದೀಗ ದೊಡ್ಮನೆಯಲ್ಲಿ ಅದೇ ಡೈಲಾಗ್ ಅನ್ನು ಅಶ್ವಿನಿಗೆ ಗಿಲ್ಲಿ ಹೊಡೆದು ಕಾಲೆಳೆಯುತ್ತಿದ್ದಾರೆ. ನನ್ನ ಅತ್ತೆ ಮಗಳಿಗೆ ಕೊನೆಯವರೆಗೂ ಕಣ್ ಹೊಡೆಯುವುದೇ, ನಮ್ಮನ್ನು ಯಾರೂ ತಡೆಯೋರು ಎಂದು ರೇಗಿಸುತ್ತಿದ್ದಾರೆ.