ತಂದೆಯ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್ ಪ್ರಭಾಕರ್: ಶುಭ ಹಾರೈಸಿದ ರವಿಚಂದ್ರನ್
ಇದೀಗ ಅವರ ಪುತ್ರ, ನಟ ವಿನೋದ್ ಪ್ರಭಾಕರ್ ತಂದೆಯ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಟೈಗರ್ ಪ್ರಭಾಕರ್ ಹೆಸರನ್ನು ಶಾಶ್ವತವಾಗಿಡಲು ಪ್ರಯತ್ನ ನಡೆಸಿದ್ದಾರೆ. ಈ ನಿರ್ಮಾಣ ಸಂಸ್ಥೆಗೆ ಟೈಗರ್ ಟಾಕೀಸ್ ಎಂಬ ಹೆಸರಿಡಲಾಗಿದ್ದು, ಆ ಸಂಸ್ಥೆ ಮುಖಾಂತರ ಲಂಕಾಸುರ ಎನ್ನುವ ಸಿನಿಮಾ ನಿರ್ಮಾಣ ಮಾಡಲಾಗಿದೆ.
ನಿನ್ನೆ ಈ ನಿರ್ಮಾಣ ಸಂಸ್ಥೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಧಿಕೃತ ಚಾಲನೆ ನೀಡಿ ವಿನೋದ್ ಪ್ರಭಾಕರ್ ಗೆ ಶುಭ ಹಾರೈಸಿದರು. ಇನ್ನಷ್ಟು ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆಯ ಮುಖಾಂತರ ಹೊರತರುವ ಯೋಜನೆ ವಿನೋದ್ ಪ್ರಭಾಕರ್ ಗಿದೆ.