ಈ ವಾರಂತ್ಯಕ್ಕೆ ರಿಲೀಸ್ ಆಗಲಿವೆ ಒಟ್ಟು 9 ಸಿನಿಮಾಗಳು!

ಮಂಗಳವಾರ, 5 ಜುಲೈ 2022 (11:02 IST)
ಬೆಂಗಳೂರು: ಸಿನಿ ಪ್ರೇಕ್ಷಕರಿಗೆ ಈ ವಾರ ಯಾರಿಗುಂಟು, ಯಾರಿಗಿಲ್ಲ ಭಾಗ್ಯ. ಯಾಕೆಂದರೆ ಇದೇ ವಾರ ಕೊನೆಗೆ ಒಟ್ಟು 9 ಸಿನಿಮಾಗಳು ತೆರೆಗೆ ಬರುತ್ತಿವೆ.

ಬಹಳ ದಿನಗಳ ನಂತರ ನಟಿ ಪ್ರೇಮಾ ನಟಿಸಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಈ ವಾರ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಸೋನು ಗೌಡ ಕೂಡಾ ಪ್ರಮುಖ ಪಾತ್ರ  ವಹಿಸಿದ್ದಾರೆ. ಇನ್ನು, ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ಶುಗರ್ ಲೆಸ್, ತೂತು ಮಡಿಕೆ, ಹೋಪ್, ನಮ್ಮ ಹುಡುಗರು, ಗಿರ್ಕಿ, ಧೋನಿ, ಚೋಟಾ ಬಾಂಬೆ, ಅಂಗೈಲಿ ಅಕ್ಷರ ಸಿನಿಮಾಗಳೂ ಜುಲೈ 8 ಕ್ಕೆ ಬಿಡುಗಡೆಯಾಗಲಿದೆ.

ಒಂದೇ ದಿನ 9 ಸ್ಯಾಂಡಲ್ ವುಡ್ ಸಿನಿಮಾಗಳು ತೆರೆ ಕಾಣುತ್ತಿರುವುದು  ವಿಶೇಷ. ಇದರಲ್ಲಿ ಯಾವುದು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ