ರಾಜ್ಯ ಸರ್ಕಾರದ ವಿರುದ್ಧ ನಟ ವಿನೋದ್ ರಾಜ್ ಆಕ್ರೋಶ
ಎಲ್ಲಾ ಉದ್ಯಮದಂತೆ ಚಿತ್ರರಂಗವೂ ಒಂದು ಉದ್ಯಮ. ಅದನ್ನು ನಂಬಿಕೊಂಡು ಹಲವು ಕುಟುಂಬಗಳಿವೆ. ಹೀಗಾಗಿ ಇದನ್ನು ಕಡೆಗಣಿಸಬೇಡಿ ಎಂದಿದ್ದಾರೆ.
ವಿಡಿಯೋ ಮೂಲಕ ಆಕ್ರೋಶ ಹೊರಹಾಕಿರುವ ವಿನೋದ್ ರಾಜ್, ಚಿತ್ರರಂಗದಲ್ಲಿ ಕಲೆಯನ್ನು ನಂಬಿ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಲಾಗುತ್ತದೆ. ಈಗಾಗಲೇ ಹಲವು ಸಿನಿಮಾಗಳು ಬಿಡುಗಡೆಯಾಗದೇ ಬಾಕಿ ಉಳಿದಿವೆ. ಚಿತ್ರಮಂದಿರಗಳಿಗೆ ವಿನಾಯ್ತಿ ನೀಡದೇ ಹೋದರೆ ಇವುಗಳ ಕತೆಯೇನು? ಇವುಗಳನ್ನು ನಂಬಿಕೊಂಡು ಬದುಕುವವರ ಕತೆಯೇನು ಎಂದು ವಿನೋದ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.