ಡಿ.30ರ ವರೆಗೆ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭಕ್ಕೆ ಗಡುವು ಎಂದ ವಿಷ್ಣು ಅಳಿಯ ಅನಿರುದ್ಧ್

ಬುಧವಾರ, 28 ನವೆಂಬರ್ 2018 (14:24 IST)
ಬೆಂಗಳೂರು : ವಿಷ್ಣು ಸ್ಮಾರಕ ನಿರ್ಮಾಣ ಕುರಿತು ಸಿಎಂ ವಿರುದ್ಧ ವಿಷ್ಣು ಅಳಿಯ ಅನಿರುದ್ಧ್ ಉಡಾಫೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ. ಅಂದು ಸಿಎಂ ಭೇಟಿಗೆ ಮೊದಲ್ಲೇ ಅನುಮತಿ ಪಡೆದಿದ್ದೆ ಎಂದು ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ.


‘ನನಗೆ ಕುಮಾರಸ್ವಾಮಿಯ ಬಗ್ಗೆ ಬೇಸರ ಇಲ್ಲ. ಸರ್ಕಾರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೇನೆ. ಕಂಠೀರವ ಸ್ಟುಡಿಯೋದಲ್ಲಿ ಮೂವರು ದಿಗ್ಗಜರ ಸ್ಮಾರಕ ಏಕೆ? ಬ್ರಹ್ಮ, ವಿಷ್ಣು, ಮಹೇಶ್ವರರೇ ಒಂದು ಕಡೆ ಇಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿದೆ. ವಿಷ್ಣು ನಮ್ಮನ್ನು ಅಗಲಿ 9 ವರ್ಷಗಳಾಗಿದೆ. 9 ವರ್ಷಗಳಿಂದ ಸ್ಮಾರಕ ನಿರ್ಮಾಣಕ್ಕೆ ಅಲೆದಾಡಿಸುತ್ತಿದ್ದಾರೆ’ ಎಂದು ಬೇಸರ ಅವರು ವ್ಯಕ್ತಪಡಿಸಿದ್ದಾರೆ.


‘ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ  ಸ್ಮಾರಕ ಆಗ್ಬೇಕು ಅಂತಿದ್ದಾರೆ. ಇನ್ನಾದರೂ ಸರ್ಕಾರ ಸ್ಮಾರಕ ನಿರ್ಮಾಣ ಬಗ್ಗೆ ಗಮನ ಹರಿಸಬೇಕು. ಸ್ಮಾರಕ ನಿರ್ಮಿಸುವಂತೆ ನಾವು ತಾಳ್ಮೆಯಿಂದಲೇ ಕೇಳುತ್ತಿದ್ದೇವೆ. ನಾವು ಕುಮಾರಸ್ವಾಮಿ ಮೇಲೆ ದಬ್ಬಾಳಿಕೆ ಮಾಡುತ್ತಿಲ್ಲ. ಡಿ.30ರ ವರೆಗೆ ಸ್ಮಾರಕ ನಿರ್ಮಾಣ ಕಾರ್ಯ ಆರಂಭಕ್ಕೆ ಗಡುವು. ಇಲ್ಲವಾದ್ರೆ ರಾಜ್ಯಾದ್ಯಂತ ಸಿಂಹಗಳನ್ನು ಬಡಿದೇಳಿಸಬೇಕಾಗುತ್ತದೆ’ ಎಂದು ನಟ ಅನಿರುದ್ಧ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ