ಇಂದು ವಿಷ್ಣುವರ್ಧನ್ ಜನ್ಮ ಜಯಂತಿ ನಿಮಿತ್ತ ಅವರನ್ನು ಮಣ್ಣು ಮಾಡಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಲು ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಆದರೆ ಈ ಜಾಗದ ಮಾಲಿಕರಾದ ಹಿರಿಯ ನಟ, ದಿವಂಗತ ಬಾಲಣ್ಣನವರ ಮಕ್ಕಳು ಅಭಿಮಾನಿಗಳ ಪೂಜೆಗೆ ಅವಕಾಶ ಕೊಟ್ಟಿಲ್ಲ.
ಆದರೆ ಅವರ ಅಭಿಮಾನಿಗಳು ಈಗಲೂ ಬಾಲಣ್ಣ ಮಕ್ಕಳ ಒಡೆತನದಲ್ಲಿರುವ ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ಜಾಗದಲ್ಲೇ ಪೂಜೆ ಮಾಡುತ್ತಿದ್ದಾರೆ. ಅದರೆ ಇದಕ್ಕೆ ಬಾಲಣ್ಣ ಮಕ್ಕಳು ತಡೆಯಾಗಿದ್ದಾರೆ. ಇಂದೂ ಕೂಡಾ ಅಭಿಮಾನಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಟ್ಟಿಲ್ಲ. ಇದರಿಂದ ಬೇಸರಗೊಂಡ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ ಮತ್ತು ಪ್ರತಿಭಟನೆಯನ್ನೂ ನಡೆಸಿದರು. ಬದುಕಿದ್ದಾಗ ವಿಷ್ಣುವರ್ಧನ್ ಗೆ ಸಾಕಷ್ಟು ಅವಮಾನ, ನೋವು ಕೊಟ್ಟರು. ಈಗ ಸತ್ತ ಮೇಲೂ ಅವರಿಗೆ ನೆಮ್ಮದಿಯಿಲ್ಲ ಎಂದು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.