ಹೊಸ ಸ್ಟುಡಿಯೋ ಪ್ರಾರಂಭಿಸಿದ ಇಳಯರಾಜರಿಗೆ ಸ್ಪೇಷಲ್ ಗಿಫ್ಟ್ ನೀಡಿದ ನಟ ವಿವೇಕ್

ಗುರುವಾರ, 18 ಮಾರ್ಚ್ 2021 (12:24 IST)
ಚೆನ್ನೈ : ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಕೆಲವು ತಿಂಗಳುಗಳ ಹಿಂದೆ ತಮ್ಮದೇ ಆದ ಹೊಸ ರೆಕಾರ್ಡಿಂಗ್ ಸ್ಟುಡಿಯೋವನ್ನು ಪ್ರಾರಂಭಿಸಿದರು.

ಈ ಸ್ಟುಡಿಯೋದ ಉದ್ಘಾಟನಾ ಸಮಾರಂಭಕ್ಕೆ ನಿರ್ದೇಶಕ ವೆಟ್ರಿಮಾರನ್, ವಿಜಯ್ ಸೇತುಪತಿ, ಮತ್ತು ಸೂರಿ ಅವರು ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ಸೂಪರ್ ಸ್ಟಾರ್ ರಜನೀಕಾಂತ್ , ನಟ ವಿವೇಕ್, ನಟ ಸೆಲ್ ಮುರುಗನ್ ಇಳಯರಾಜ ಅವರ ಸ್ಟುಡಿಯೋಗೆ ಭೇಟಿ ನೀಡಿದ್ದರು.

ಈಗ ನಟ ವಿವೇಕ್ ಅವರು ಇಳಯರಾಜ ಅವರ ಸ್ಟುಡಿಯೋಗೆ ಭೇಟಿ ನೀಡಿದ್ದು, ಅವರು ಇಳಯರಾಜ ಅವರಿಗೆ ಬುದ್ಧನ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ