ಸೆಪ್ಟೆಂಬರ್ 16 ರಂದು ಥಿಯೇಟರ್ ಗೆ ಹೋಗಿ, ರಿಯಾಯಿತಿ ದರದಲ್ಲಿ ಸಿನಿಮಾ ನೋಡಿ

ಶನಿವಾರ, 3 ಸೆಪ್ಟಂಬರ್ 2022 (18:02 IST)
ಬೆಂಗಳೂರು: ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ ಸಿನಿಮಾಗಳು ಬಲುದುಬಾರಿ ಎನಿಸುತ್ತಿದೆಯೇ? ಹಾಗಿದ್ದರೆ ಸೆಪ್ಟೆಂಬರ್ 16 ರಂದು ಒಂದು ದಿನದ ಮಟ್ಟಿಗೆ ನಿಮ್ಮ ಆಸೆ ಈಡೇರಿಸಿಕೊಳ್ಳಲು ಅವಕಾಶ ಸಿಗಲಿದೆ.

ಸೆಪ್ಟೆಂಬರ್ 16 ರಂದು ರಾಷ್ಟ್ರೀಯ ಸಿನಿಮಾ ದಿನ ಆಚರಣೆ ಮಾಡಲಾಗುತ್ತಿದ್ದು, ಈ ದಿನ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ 75 ರೂ. ಗೆ ಸಿನಿಮಾ ವೀಕ್ಷಿಸಬಹುದಾಗಿದೆ.

ಕೊರೋನಾ ನಂತರ ಚಿತ್ರಮಂದಿರಗಳಿಗೆ ಜನ ಬರುವುದು ಕಡಿಮೆಯಾಗಿದೆ. ಜನರನ್ನು ಮತ್ತೆ ಥಿಯೇಟರ್ ನತ್ತ ಸೆಳೆಯಲು ಈ ತಂತ್ರ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ