ನಟ ದರ್ಶನ್‌ಗೆ ಜಾಮೀನು ನೀಡದಂತೆ ಸುಪ್ರೀಂಗೆ ಅರ್ಜಿ ಸಲ್ಲಿಸಲಿದ್ದೇವೆ: ಜಿ ಪರಮೇಶ್ವರ

Sampriya

ಗುರುವಾರ, 21 ನವೆಂಬರ್ 2024 (18:43 IST)
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿ ನಟ ದರ್ಶನ್‌ ಚಿಕಿತ್ಸೆ ಬಳಿಕ ಜೈಲಿಗೆ ಹೋಗಬೇಕು. ಅವರಿಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದ್ಯ ದರ್ಶನ್ ಅವರಿಗೆ ಚಿಕಿತ್ಸೆ ಸಲುವಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಜಾಮೀನಿನ ಅವಧಿ ವಿಸ್ತರಿಸುವಂತೆ ಕೇಳಿಕೊಂಡಿರುವುದು ನನಗೆ ಗೊತ್ತಿಲ್ಲ ಎಂದರು.

ಇನ್ನೂ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಹೆಚ್ಚುವರಿ ದೋಷಾರೋಪಟ್ಟಿ ಸಲ್ಲಿಸುವ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸಾಕ್ಷ್ಯ ಸಂಗ್ರಹದ ಬಳಿಕ ದೋಷಾರೋಪಪಟ್ಟಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ