ಮಾಸ್ತಿಗುಡಿ ಚಿತ್ರತಂಡದ ತಪ್ಪಿದ್ದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್

ಸೋಮವಾರ, 7 ನವೆಂಬರ್ 2016 (18:55 IST)
ಮಾಸ್ತಿಗುಡಿ ದುರಂತಕ್ಕೆ ಸಂಭವಿಸಿದಂತೆ ಚಿತ್ರತಂಡದ ತಪ್ಪಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. 
 
ಮಾಸ್ತಿಗುಡಿ ಚಿತ್ರದ ಚಿತ್ರಿಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್‌‌ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್‌ ಸಂದರ್ಭದಲ್ಲಿ ಇಬ್ಬರು ಸಹನಟರು ವಿಧಿವಶರಾದಂತಹ ಘಟನೆ ಸಂಭವಿಸಿದೆ.
 
ನಟ ವಿಜಯ್ ಮತ್ತು ಸಹನಟರಾದ ಅನಿಲ್ ಮತ್ತು ಉದಯ್ ಶೂಟಿಂಗ್ ವೇಳೆ ಹೆಲಿಕಾಪ್ಟರ್‌ನಿಂದ ನೀರಿಗೆ ಹಾರಿದ್ದಾರೆ. ಅದರಲ್ಲಿ ಉದಯ್ ಮತ್ತು ಅನಿಲ್ ದಡಕ್ಕೆ ಬರುವಲ್ಲಿ ವಿಫಲವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕೆರೆಯಲ್ಲಿ ಅನಿಲ್ ಮತ್ತು ಉದಯ್‌ ಮೃತ ಶೋಧ ಕಾರ್ಯ ನಡೆದಿದ್ದು, ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.
 
ಚಾಲೆಂಜಿಂಗ್ ಆಕ್ಷನ್ ದೃಶ್ಯವಿರುವುದರಿಂದ ಡ್ಯೂಪ್ ಬಳಸದಿರಲು ಸಹನಟರು ನಿರ್ಧರಿಸಿದ್ದರು. ನಾವು ಏನು ಅನ್ನುವುದನ್ನು ಪ್ರೂವ್ ಮಾಡುತ್ತೇವೆ ಎಂದು ಸಹನಟರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
 
ಸ್ಟಂಟ್ ಮಾಸ್ಟರ್ ರವಿವರ್ಮಾ ಅವರ ನೇತೃತ್ವದಲ್ಲಿ ಚಿತ್ರೀಕರಣ ನಡೆಯುತ್ತಿತ್ತು ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ