ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈಗಾಗಲೇ ಈ ಪಾತ್ರದ ಸುತ್ತಾ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳೂ ಆಗುತ್ತಿವೆ. ಈ ಕಾರಣದಿಂದಲೇ ಪ್ರೇಕ್ಷಕರೆಲ್ಲ ಬಿಡುಗಡೆಯ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ.
ಡಿ ಮಂಜುನಾಥ್ ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅಚ್ಚರಿಗಳ ಸಂತೆಯೇ ನೆರೆದಿದೆ. ಫ್ಯಾಮಿಲಿ ಸಮೇತರಾಗಿ ಎಲ್ಲ ವರ್ಗದ ಪ್ರೇಕ್ಷಕರೂ ನೋಡುವಂಥಾ ಸಿನಿಮಾ ವೀಕೆಂಡ್. ಇದರಲ್ಲಿ ಟೆಕ್ಕಿಗಳ ಬದುಕಿನ ಮೇಲೆ ಬೆಳಕು ಚೆಲ್ಲುವಂಥಾ ಕಥಾ ಹಂದರವಿದೆ. ಈ ಮೂಲಕವೇ ಸಮಸ್ತ ಯುವ ಸಮೂಹಕ್ಕೂ ಬಲವಾದೊಂದು ಸಂದೇಶವನ್ನು ರವಾನಿಸೋ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರಂತೆ.