ವೀಕೆಂಡ್ ವಿತ್ ರಮೇಶ್ ನಲ್ಲಿ ಹೊರಬೀಳಲಿದೆ ರಮ್ಯಾ ಬದುಕಿನ ಗುಟ್ಟುಗಳು!
ಈ ಸೀಸನ್ ನ ಮೊದಲ ಅತಿಥಿಯಾಗಿ ನಟಿ ರಮ್ಯಾ ಭಾಗವಹಿಸಲಿದ್ದಾರೆ. ರಮ್ಯಾ ಪಾಲ್ಗೊಂಡಿರುವ ಎಪಿಸೋಡ್ ಇಂದು ಮತ್ತು ನಾಳೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಈ ಎಪಿಸೋಡ್ ನಲ್ಲಿ ರಮ್ಯಾ ತಮ್ಮ ಜೀವನದ ಹಲವು ಯಾರಿಗೂ ತಿಳಿಯದ ವಿಚಾರಗಳನ್ನು ತೆರೆದುಕೊಟ್ಟಿದ್ದಾರೆ. ಅಮೃತಧಾರೆ ಸಿನಿಮಾದಲ್ಲಿ ನಡೆದಿದ್ದ ಘಟನೆ, ಅಪ್ಪು ಮೇಲಿನ ತಮ್ಮ ಪ್ರೀತಿ, ತಮ್ಮ ಬಾಲ್ಯ ಹೀಗೆ ಹಲವು ವಿಚಾರಗಳನ್ನು ರಮ್ಯಾ ಹೇಳಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೀವನಕತೆ ಕೇಳಲು ರೆಡಿಯಾಗಿ.