ಕಾಂತಾರ 2 ಸಿನಿಮಾಗೆ ಇಷ್ಟು ಸಂಭಾವನೆ ಪಡೆಯುತ್ತಾರಂತೆ ರಿಷಬ್ ಶೆಟ್ಟಿ!

ಶುಕ್ರವಾರ, 24 ಮಾರ್ಚ್ 2023 (09:00 IST)
Photo Courtesy: Twitter
ಬೆಂಗಳೂರು: ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ ಮಾರ್ಕೆಟ್ ವಾಲ್ಯೂ ಏಕ್ ದಂ ಭರ್ಜರಿ ಏರಿಕೆಯಾಗಿದೆ. ರಿಷಬ್ ಈಗ ಬಹುಬೇಡಿಕೆಯ ನಟ, ನಿರ್ದೇಶಕ.

ರಿಷಬ್ ಶೆಟ್ಟಿ ಈಗ ಕಾಂತಾರ 2 ಸಿನಿಮಾ ತಯಾರಿಯಲ್ಲಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಬಗ್ಗೆ ಈಗ ಸುದ್ದಿಯೊಂದು ಹರಿದಾಡುತ್ತಿದೆ.

ರಿಷಬ್ ಶೆಟ್ಟಿ ಕಾಂತಾರ ಸಿನಿಮಾಗೆ 5 ಕೋಟಿ ಸಂಭಾವನೆ ಪಡೆದಿದ್ದರಂತೆ. ಆದರೆ ಕಾಂತಾರ 2 ಸಿನಿಮಾಗೆ ಹೊಂಬಾಳೆ ಫಿಲಂಸ್ ರಿಷಬ್ ಶೆಟ್ಟಿಗೆ 30 ಕೋಟಿ ರೂ. ಅಧಿಕ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ