ಅರ್ಜುನ್ ಸರ್ಜಾಗೆ ಬೆಂಬಲ ನೀಡಿದವರಿಗೆ ಶೃತಿ ಹರಿಹರನ್ ಹೇಳಿದ್ದೇನು?

ಗುರುವಾರ, 25 ಅಕ್ಟೋಬರ್ 2018 (10:09 IST)
ಬೆಂಗಳೂರು : ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಆರೋಪಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಬಾರೀ  ಪರ ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದ್ದು, ಇದೀಗ ಅರ್ಜುನ್ ಸರ್ಜಾ ಪರ ನಿಂತವರಿಗೆ ನಟಿ  ಶೃತಿ ಹರಿಹರನ್ ತಿರುಗೇಟು ನೀಡಿದ್ದಾರೆ.


“ಯಾರೂ ಹೇಳಿಕೊಟ್ಟು ನನಗೆ ಈ ರೀತಿ ಮಾಡಿಸುತ್ತಿಲ್ಲ. ಚೇತನ್, ಪ್ರಕಾಶ್ ರೈ ಹಾಗೂ ಕವಿತಾ ಲಂಕೇಶ್ ಹಾಗೂ ಹಲವು ಕಲಾವಿದರು ಈ ರೀತಿ ಮಾಡು ಎಂದು ಹೇಳಿಲ್ಲ, ಅವರು ನನ್ನ ಪರವಾಗಿ ನಿಂತಿದ್ದಾರೆ. ನಾನು ಅರ್ಜುನ್ ಸರ್ಜಾ ಅವರ ಬಗ್ಗೆ ಏನೂ ಹೇಳಿಕೆ ನೀಡಿದ್ದೇನೆ ಎಂಬುದು ನನಗೆ ತಿಳಿದಿದೆ. ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು ನನಗೆ ಭಯವಿಲ್ಲ. ನಾನು ಧೈರ್ಯದಿಂದ ಈ ಪ್ರಕರಣದ ವಿರುದ್ಧ ಹೋರಾಡುತ್ತೇನೆ “ ಎಂದು ಹೇಳಿದ್ದಾರೆ.


“ ನೀವು ನಿಮಗೆ ಯಾರು ಸರಿ ಎಂದು ಅನಿಸುತ್ತಾರೋ ಅವರನ್ನು ಬೆಂಬಲಿಸಿ. ಈ ವಿವಾದ ಕೋರ್ಟ್ ಗೆ ಹೋದರೆ ನಾನು ಅಲ್ಲಿ ಎಲ್ಲಾ ಸಾಕ್ಷಿಗಳನ್ನು ತೋರಿಸುತ್ತೇನೆ, ಆಗ ಕಾನೂನಿನ ಪ್ರಕಾರ ನ್ಯಾಯ ಸಿಗುತ್ತದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ