ಮೀಟೂ ಆರೋಪಗಳ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದೇನು?

ಗುರುವಾರ, 25 ಅಕ್ಟೋಬರ್ 2018 (09:35 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪಗಳು ಸಾಕಷ್ಟು ಕೇಳಿ ಬರುತ್ತಿದ್ದು, ಈ ವಿಚಾರವಾಗಿ ಇದೀಗ ಪ್ರತಿಕ್ರಿಯೆ ನೀಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿತ್ರೋದ್ಯಮದ ಈ ಬೆಳವಣಿಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ಅವರು,’ ನಾವು ಯಾರನ್ನ , ಹೇಗೆ, ಏಕೆ, ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಾನು ಯಾರ ಪರ ಹಾಗೂ ವಿರೋಧ ಹೇಳಲು ಇಷ್ಟಪಡುವುದಿಲ್ಲ. ನಾವು ತೆರೆ ಮೇಲೆ ಎಲ್ಲವನ್ನೂ ನೋಡುತ್ತೇವೆ. ಹಾಗೊಂದು ವೇಳೆ ಚಿತ್ರದಲ್ಲಿ ಅಭಿನಯಿಸುವಾಗ ನಮಗೆ ಇಷ್ಟವಿಲ್ಲದ ದೃಶ್ಯ ಮಾಡಬೇಕಾದ ಪರಿಸ್ಥಿತಿ ಬಂದಾಗ ಅದೇ ಸ್ಥಳದಲ್ಲಿ ಪ್ರತಿಕ್ರಿಯಿಸಬೇಕು ಆಗ ನೂರು ಜನರಲ್ಲಿ ಹತ್ತು ಮಂದಿಯಾದರೂ ಒಳ್ಳೆಯವರು ಇರುತ್ತಾರೆ ಆಗ ಅವರು ಸಹಾಯಕ್ಕೆ ಬರುತ್ತಾರೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ