ತರಕಾರಿ ಮಾರುತ್ತಿದ್ದ ಯುವತಿಗೆ ನಟ ಸೋನು ಸೂದ್ ನೀಡಿದ ಗಿಫ್ಟ್ ಏನು?

ಮಂಗಳವಾರ, 28 ಜುಲೈ 2020 (18:54 IST)
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಬಾಲಿವುಡ್ ನಟ ಸೋನು ಸೂದ್ ಸ್ಪಂದನೆ ಮಾಡುತ್ತಿದ್ದಾರೆ.

25 ಸಾವಿರ ಫೇಸ್ ಮಾಸ್ಕ್ ವಿತರಣೆ, ಆ ಬಳಿಕ ಬಡ ರೈತ ಕುಟುಂಬಕ್ಕೆ ಟ್ರಾಕ್ಟರ್ ಕೊಡಿಸಿದ್ದ ನಟ, ಇದೀಗ ಯುವತಿಯೊಬ್ಬಳಿಗೆ ನೆರವಾಗಿದ್ದಾರೆ.

ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿದ್ದ ಮಹಿಳಾ ಟೆಕ್ಕಿ ಶಾರದಾ ಎನ್ನುವವರು ಹೈದ್ರಾಬಾದ್ ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ಈ ವಿಷಯ ತಿಳಿದ ನಟ ಸೋನು ಸೂದ್ ಶಾರದಾ ಅವರಿಗೆ ಉದ್ಯೋಗ ಕೊಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ