ಶೇ. 80 ರಷ್ಟು ಭಾರತೀಯರು ಆಫೀಸ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ!

ಶುಕ್ರವಾರ, 24 ಜುಲೈ 2020 (12:32 IST)
ನವದೆಹಲಿ: ಕೊರೋನಾ ಭಯದಿಂದ ಹೆಚ್ಚಿನ ಕಂಪನಿಗಳು ತಮ್ಮ ನೌಕರರಿಗೆ ಅಗತ್ಯವಿದ್ದರೆ ಮಾತ್ರ ಕಚೇರಿಗೆ ಬಂದರೆ ಸಾಕು ಎಂದು ವರ್ಕ್ ಫ್ರಂ ಹೋಂ ಆಯ್ಕೆ ಕೊಟ್ಟುಬಿಟ್ಟಿದೆ.


ಆದರೆ ಇದರಿಂದ ಹೆಚ್ಚಿನ ಮಂದಿಗೆ ಆಫೀಸ್ ಗೆ ಹೋಗುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇತ್ತೀಚೆಗೆ ನಡೆದ ಜಾಗತಿಕ ಸಮೀಕ್ಷೆಯೊಂದರಲ್ಲಿ ಈ ವಿಚಾರ ತಿಳಿದುಬಂದಿದ್ದು, ಶೇ. 80 ರಷ್ಟು ಭಾರತೀಯರು ಕಚೇರಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಈ ಪಟ್ಟಿಯಲ್ಲಿ ಸಿಂಗಾಪುರ ರಾಷ್ಟ್ರ ಮುಂದಿದ್ದು, ಇಲ್ಲಿ ಶೇ81 ಮಂದಿ ಕಚೇರಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರತಿನಿತ್ಯ ಕಚೇರಿಗೆ ತೆರಳುವುದು ಜೀವನದ ಭಾಗವಾಗಿತ್ತು. ಆದರೆ ಈಗ ಅದನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಮಂದಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ