ತಮ್ಮ ಮದುವೆಗೆ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ ಶಾಕಿಂಗ್ ನ್ಯೂಸ್ ಏನು ಗೊತ್ತಾ...?
ಭಾನುವಾರ, 18 ಫೆಬ್ರವರಿ 2018 (06:13 IST)
ಬೆಂಗಳೂರು : ಕಳೆದ ವರ್ಷ ಎಂಗೇಜ್ ಆದ ಸ್ಯಾಂಡಲ್‌ವುಡ್ ನ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ಸದ್ಯದಲ್ಲೇ ಹಸೆಮಣೆ ಏರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಅವರು ಬೇಸರದ ವಿಷಯವೊಂದನ್ನು ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರಿಗೆ ಖಾಸಗಿ ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ನಿಮ್ಮ ಮದುವೆ ಯಾವಾಗ? ಎಂದು ಕೇಳಿದ ಪ್ರಶ್ನೆಗೆ ಅವರು,’ ನಾವು ಎಂಗೇಜ್ ಮಾಡಿಕೊಂಡಿದ್ದೇವೆ ಅಂದ ಮಾತ್ರಕ್ಕೆ ತಕ್ಷಣ ಮದುವೆಯಾಗಬೇಕು ಅಂತಲ್ಲ. ಬಹಳಷ್ಟು ಜನ ನನ್ನನ್ನು ಕೇಳಿದ್ರು ಇಷ್ಟು ಚಿಕ್ಕ ವಯಸ್ಸಿಗೆ ಮದುವೆ ಯಾಕೆ ಅಂತಾ. ಎಲ್ಲರಿಗೂ ಹೇಳಿದ್ದೇನೆ ನಾನು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೇನೆ ಅಷ್ಟೇ. ಕರಿಯರ್ ಚೆನ್ನಾಗಿ ಹೋಗುತ್ತಿದೆ. ತಡವಾಗಿ ಮದುವೆಯಾಗುತ್ತೇನೆ ಅಂತ ಹೇಳುತ್ತಿದ್ದೇನೆ’ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ