ನವದೆಹಲಿ: ಜಿಯೊ ಹಾಟ್‌ಸ್ಟಾರ್ ಅಧಿಕೃತವಾಗಿ ಇಂದು ಬಿಡುಗಡೆಯಾಗಿದೆ. ಭಾರತದ ಎರಡು ಪ್ರತಿಷ್ಠಿತ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಜಿಯೋಸಿನಿಮಾ ಮತ್ತು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಒಟ್ಟಾಗಿ ಒಂದು ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೊ ಹಾಟ್‌ಸ್ಟಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ವಿಲೀನದ ಜಂಟಿ ಸಹಯೋಗದಲ್ಲಿ ರೂಪುಗೊಂಡಿರುವ ಜಿಯೊಸ್ಟಾರ್ ಇದೀಗ ಜಿಯೊ ಹಾಟ್‌ಸ್ಟಾರ್ ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಆನ್‌ಲೈನ್ ಸ್ಟ್ರೀಮಿಂಗ್ ವೇದಿಕೆಯಲ್ಲಿ ಜಿಯೊ ಹಾಟ್‌ಸ್ಟಾರ್ ಅನಂತ ಸಾಧ್ಯತೆಗಳನ್ನು ಅನಾವರಣಗೊಳಿಸಲಿದೆ.
ಜಿಯೊಸಿನಿಮಾ ಮತ್ತು ಡಿಸ್ನಿ+ ಹಾಟ್ ಸ್ಟಾರ್ ಮನರಂಜನೆ ಮತ್ತು ಕ್ರೀಡಾ ಸ್ಟ್ರೀಮಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸಲು ಒಟ್ಟಿಗೆ ಸೇರಿವೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಬ್ರ್ಯಾಂಡ್‌ಗಳ ಒಗ್ಗೂಡುವಿಕೆ ಮೂಲಕ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. 3 ಲಕ್ಷ ಗಂಟೆಗಳ ಮನರಂಜನೆ, ಲೈವ್ ಸ್ಪೋರ್ಟ್ಸ್ ಪ್ರಸಾರ ಮತ್ತು 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೊ ಹಾಟ್‌ಸ್ಟಾರ್ ಮನರಂಜನೆಯನ್ನು ಮರು ವ್ಯಾಖ್ಯಾನಿಸಲಿದೆ.
ಜಿಯೊ ಹಾಟ್‌ಸ್ಟಾರ್ ಚಂದಾದಾರಿಕೆ ಸೇವೆ ₹149ಕ್ಕೆ (ಮೂರು ತಿಂಗಳಿಗೆ) ಆರಂಭವಾಗಲಿದೆ. ವೀಕ್ಷಕರ ಅಗತ್ಯಗಳಿಗೆ ರೂಪಿಸಲಾದ ಪ್ಲ್ಯಾನ್‌ಗಳು ವಿವಿಧ ಅಗತ್ಯಗಳಿಗೆ ತಕ್ಕಂತೆ ಮೂರು ಮೊಬೈಲ್ ಯೋಜನೆಗಳು ಲಭ್ಯವಿದೆ.
ಮೊಬೈಲ್ ಪ್ಲಾನ್ ಮೂರು ತಿಂಗಳಿಗೆ ₹149 ಅಥವಾ ವಾರ್ಷಿಕವಾಗಿ ₹499 ಪಾವತಿಸಬೇಕು. ಸೂಪರ್ ಪ್ಲ್ಯಾನ್ ಮೊಬೈಲ್, ವೆಬ್ ಮತ್ತು ಬೆಂಬಲಿತ ಲಿವಿಂಗ್ ರೂಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎರಡು ಸಾಧನಗಳಲ್ಲಿ ಪ್ಲ್ಯಾನ್ ಒದಗಿಸುತ್ತದೆ. ಇದರ ಬೆಲೆ ಮೂರು ತಿಂಗಳಿಗೆ ₹299 ಮತ್ತು ವಾರ್ಷಿಕವಾಗಿ ₹899 ಆಗಿದೆ.
ಪ್ರೀಮಿಯಂ ಪ್ಲ್ಯಾನ್ ನಾಲ್ಕು ಸಾಧನಗಳವರೆಗೆ ಜಾಹೀರಾತು-ಮುಕ್ತ ವೀಕ್ಷಣೆಯನ್ನು ಅನುಮತಿಸುತ್ತದೆ. ಇದರ ಬೆಲೆ ಮೂರು ತಿಂಗಳಿಗೆ ₹499 ಅಥವಾ ವಾರ್ಷಿಕವಾಗಿ ₹1,499 ಆಗಿದೆ.