ವೈರಲ್‌ ಬ್ಯೂಟಿಗೆ ಮತ್ತೊಂದು ಆಫರ್‌: ಸಿನಿಮಾ ಬೆನ್ನಲ್ಲೇ ಮತ್ತೊಂದು ಆಫರ್‌ ಪಡೆದ ಮೊನಾಲಿಸಾ

Sampriya

ಶುಕ್ರವಾರ, 14 ಫೆಬ್ರವರಿ 2025 (14:46 IST)
Photo Courtesy X
ಕೇರಳ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಾಮೇಳದ ವೈರಲ್‌ ಬ್ಯೂಟಿ ಮೋನಾಲಿಸಾಗೆ ಅದೃಷ್ಟ ಖುಲಾಯಿಸಿದೆ. ಸಿನಿಮಾಕ್ಕೆ ಬಣ್ಣ ಹಚ್ಚಲು ಸಿದ್ಧತೆ ನಡೆಸುತ್ತಿರುವ ಈ ನೀಲಿಗಣ್ಣಿನ ಬ್ಯೂಟಿ ಈಗ ಪ್ರಸಿದ್ಧ ಆಭರಣ ಸಂಸ್ಥೆಯೊಂದರ ರಾಯಭಾರಿಯಾಗಿದ್ದಾರೆ.

ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಣಿ ಮಾರಲು ಬಂದಿದ್ದ ಮೋನಾಲಿಸಾ ಸೋಷಿಯಲ್‌ ಮೀಡಿಯಾ ಸೆನ್ಸೆಷನ್‌ ಆಗಿದ್ದಳು.  16 ವರ್ಷದ ಮೊನಾಲಿಸಾ ಈಗ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿ ನೇಮಕಗೊಂಡಿದ್ದಾಳೆ.

ಕೇರಳದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಚೆಮ್ಮನೂರ್‌ ಜ್ಯುವೆಲ್ಲರಿಯ ರಾಯಭಾರಿಯಾಗಿ ಮೋನಾಲಿಸಾ ನೇಮಕಗೊಂಡಿದ್ದಾರೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಬಾಬಿ ಚೆಮ್ಮನೂರ್‌ ಖಚಿತಪಡಿಸಿದ್ದಾರೆ., ಮೊನಾಲಿಸಾ ಇಂದು ಕೇರಳದ ಕಲ್ಲಿಕೋಟೆಗೆ ಬರಲಿದ್ದಾರೆ. ಅವರು ಇದಕ್ಕೆ ಬರೋಬ್ಬರಿ ₹ 15 ಲಕ್ಷ  ಸಂಭಾವನೆ ಪಡೆಯುವರು.  

ಬಾಲಿವುಡ್‌ ಸಿನಿಮಾಕ್ಕೆ ಈಗಾಗಲೇ ಸಹಿ ಮಾಡಿರುವ ಮೋನಾಲಿಸಾ ತಮ್ಮ ಚೊಚ್ಚಲ ಚಿತ್ರಕ್ಕಾಗಿ ₹ 21 ಲಕ್ಷ ರೂಪಾಯಿಗಳ ಗಣನೀಯ ಸಂಭಾವನೆಗೆ ಸಹಿ ಹಾಕಿದ್ದಾರೆ. 1 ಲಕ್ಷ ರೂಪಾಯಿಗಳ ಮುಂಗಡವಾಗಿ ಪಡೆದಿದ್ದಾರೆ. ತಮ್ಮ ಜೀವನವನ್ನು ಬದಲಾಯಿಸುವ ಅವಕಾಶದ ಬಗ್ಗೆ ಮೊನಾಲಿಸಾ ಭಾವನಾತ್ಮಕ ಸಂದೇಶವನ್ನು ಈ ಹಿಂದೆ ಹಂಚಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ