ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆ ಯಾವಾಗ ಗೊತ್ತಾ…?
ಭಾನುವಾರ, 20 ಮೇ 2018 (11:55 IST)
ಚೆನ್ನೈ: ರಜನೀಕಾಂತ್ ಅಭಿನಯದ ಕಾಲಾ ಸಿನಿಮಾ ಜೂನ್ 7 ರಂದು ಬಿಡುಗಡೆಯಾಗಲಿದೆ. ಧನುಷ್ ಪ್ರೊಡಕ್ಷ ನ್ ಹೌಸ್ ಈ ವಿಷಯದ ಕುರಿತು ಮಾಹಿತಿ ದೃಢಪಡಿಸಿದೆ. ಈ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುತ್ತದೆ ಎಂಬ ಸುದ್ದಿ ಸುಳ್ಳು. ನಾವು ಪ್ಲ್ಯಾನ್ ಮಾಡಿರುವಂತೆ ಇದೇ ಜೂನ್ 7 ಕ್ಕೆ ಬಿಡುಗಡೆಯಾಗಲಿದೆ. ಸೂಪರ್‌ಸ್ಟಾರ್ ರಜನೀಕಾಂತ್‌ರನ್ನು ಕಾಲಾ ಕರಿಕಾಲನ್ ರೂಪದಲ್ಲಿ ನಿಮಗೆ ತೋರಿಸಲು ನಾವೂ ಕಾತರರಾಗಿದ್ದೇವೆ ಎಂದು ಎಂದು ಪ್ರೊಡಕ್ಷ ನ್ ಹೌಸ್ ಹೇಳಿದೆ.
ಪ.ರಂಜಿತ್ ನಿರ್ದೇಶನವಿರುವ ಕಾಲಾ ಸಿನಿಮಾದಲ್ಲಿ ರಜನೀಕಾಂತ್, ಕಾಲಾ ಹೆಸರಿನ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ತೆರೆಮೇಲೆ ಮೋಡಿ ಮಾಡಲಿದ್ದಾರೆ. ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ