ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ಯಾರಾಗಿರಬಹುದು ಗೊತ್ತೇ?!
ಅವರನ್ನು ಒಮ್ಮೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ನೋಡಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಬರಲಾಗುತ್ತಿರಲಿಲ್ಲ. ಆದರೆ ಈ ಬಾರಿ ಖಂಡಿತಾ ಬರುತ್ತೇನೆ ಎಂದು ರಮೇಶ್ ಅರವಿಂದ್ ಗೆ ವೀರೇಂದ್ರ ಹೆಗ್ಡೆಯವರು ಭರವಸೆ ನೀಡಿದ್ದಾರೆ. ಹೀಗಾಗಿ ಅವರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ಆವೃತ್ತಿಯ ಮೊದಲ ಸಾಧಕರಾದರೂ ಅಚ್ಚರಿಯೇನಿಲ್ಲ.