ಬಹುಬಜೆಟ್ ನ ‘ರಾಧೆ ಶ್ಯಾಮ’ ಚಿತ್ರದ ಸಂಗೀತ ಸಂಯೋಜಕರು ಯಾರು ಗೊತ್ತಾ?

ಶನಿವಾರ, 24 ಅಕ್ಟೋಬರ್ 2020 (11:02 IST)
ಹೈದರಾಬಾದ್ : ನಟ ಪ್ರಭಾಸ್ ಹಾಗೂ ನಟಿ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ’ ಸಿನಿಮಾ ಸುಮಾರು 400ಕೋಟಿ ರೂ ಬಜೆಟ್ ನಲ್ಲಿ ಮೂಡಿಬರುತ್ತಿದೆ.

ಹೌದು. ನಟ ಪ್ರಭಾಸ್  ಅಭಿನಯದ ‘ರಾಧೆ ಶ್ಯಾಮ’  ಲವ್ ಸ್ಟೋರಿ ಸಿನಿಮಾ ಆಗಿದ್ದು, ಇಂತಹ ಸಿನಿಮಾದಲ್ಲಿ  ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇಂತಹ ಬಿಗ್ ಬಜೆಟ್ ಸಿನಿಮಾಕ್ಕೆ ಎ.ಆರ್ ರೆಹಮಾನ್ ಅವರಂತಹ ಖ್ಯಾತ ಸಂಗೀತ ಸಂಯೋಜಕರ ಬದಲು ಚಿಕ್ಕ ಹಾಗೂ ಅಷ್ಟೊಂದು ಖ್ಯಾತಿ ಗಳಿಸದ ಸಂಗೀತ ಸಂಯೋಜಕರನ್ನು ಆಯ್ಕೆ ಮಾಡಲಾಗಿದೆಯಂತೆ.

ಅವರು ಬೇರೆ ಯಾರು ಅಲ್ಲ. ಕೆಲವು ತೆಲುಗು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ ಜಸ್ಟಿನ್ ಪ್ರಭಾಕರನ್ ಅವರಿಗೆ  ರಾಧೆ ಶ್ಯಾಮ ಚಿತ್ರದ ಸಂಗೀತ ಸಂಯೋಜನೆ ಕೆಲಸ ನೀಡಲಾಗಿದೆಯಂತೆ. ಯಾಕೆಂದರೆ ಎ.ಆರ್ ರೆಹಮಾನ್  ಜೊತೆ ಮಾತುಕತೆ ನಡೆಸಿದರೂ ಸಂಭಾವನೆ ಒಪ್ಪಿಗೆಯಾಗಿಲ್ಲ ಆದಕಾರಣ ಜಸ್ಟಿನ್ ಪ್ರಭಾಕರನ್ ಅವರಿಗೆ  ನೀಡಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ