ಕಿಚ್ಚ47 ಸಿನಿಮಾಗೆ ಬಂಡವಾಳ ಹಾಕುವವರು ಯಾರು ಗೊತ್ತಾ?

ಸೋಮವಾರ, 28 ಆಗಸ್ಟ್ 2023 (16:18 IST)
ಬೆಂಗಳೂರು: ಕಿಚ್ಚ ಸುದೀಪ್ ಒಟ್ಟು ಮೂರು ಸಿನಿಮಾ ಕತೆಗಳನ್ನು ಒಪ್ಪಿಕೊಂಡಿರುವುದಾಗಿ ಈ ಹಿಂದೆ ಹೇಳಿದ್ದರು. ಅದರಂತೆ ಒಂದರ ಶೂಟಿಂಗ್ ಈಗಾಗಲೇ ಜಾರಿಯಲ್ಲಿದೆ.

ಕಿಚ್ಚ46 ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ಇದೀಗ ಕಿಚ್ಚ 47 ಬಗ್ಗೆ ಅಪ್ ಡೇಟ್ ಒಂದು ಕೇಳಿಬರುತ್ತಿದೆ. ಕಿಚ್ಚನ ಮುಂದಿನ ಸಿನಿಮಾಗೆ ಕೆಆರ್ ಜಿ ಕನೆಕ್ಟ್ಸ್ ಸಂಸ್ಥೆ ಬಂಡವಾಳ ಹೂಡಲಿದೆಯಂತೆ.

ಈ ಸಿನಿಮಾ ಬಗ್ಗೆ ಕಿಚ್ಚನ ಹುಟ್ಟುಹಬ್ಬದಂದು ಅಂದರೆ ಸೆಪ್ಟೆಂಬರ್ 2 ರಂದು ಅಧಿಕೃತ ಘೋಷಣೆಯಾಗಲಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ