ಪ್ರಧಾನಿ ಮೋದಿ ತಮಿಳುನಾಡು ಭೇಟಿಗೆ ಕಾಲಿವುಡ್ ನ ಈ ನಟಿ ಟ್ವೀಟ್ ಮಾಡಿದ್ದೇನು?

ಮಂಗಳವಾರ, 16 ಫೆಬ್ರವರಿ 2021 (10:46 IST)
ಚೆನ್ನೈ : ಪ್ರಧಾನಿ ಮೋದಿಯವರ ತಮಿಳುನಾಡಿನ ಭೇಟಿಯ ವೇಳೆ ಕಾಲಿವುಡ್ ನಟಿಯೊಬ್ಬಳು ಟ್ವೀಟ್ ಮಾಡಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಫೆ.14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ ನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.  ಆ ವೇಳೆ ಕಾಲಿವುಡ್ ನಟಿ ಓವಿಯಾ ಟ್ವೀಟ್ ಮಾಡಿ ‘ಗೋ  ಬ್ಯಾಕ್ ಮೋದಿ’ ಎಂದು ಪೋಸ್ಟ್ ಮಾಡಿದ್ದಾರೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಸೈಬರ್ ಸೆಲ್ ಸಿಬಿ ಸಿಐಡಿಯೊಂದಿಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಯಾಕೆಂದರೆ  ನಟಿ ಓವಿಯಾ ಅವರ ಟ್ವೀಟ್ ಹಿಂದೆ ಕೆಲವು ಚೈನೀಸ್ ಮತ್ತು ಶ್ರೀಲಂಕಾದ ಜನರು ಇರಬಹುದೆಂದು ಭಾವಿಸಲಾಗಿದೆ. ದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಭಂಗ ತರುವ ಸಂಚು ರೂಪಿಸಲಾಗಿದೆ. ಅದಕ್ಕ ನಟಿ ಓವಿಯಾರನ್ನು ಬಳಸಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ