ವಿಜಯ್ ಸೇತುಪತಿ ‘ವಡಚೆನ್ನೈ’ ಚಿತ್ರತಂಡದಿಂದ ಹೊರಬರಲು ಕಾರಣವೇನು ಗೊತ್ತಾ?

ಶುಕ್ರವಾರ, 8 ಜನವರಿ 2021 (15:08 IST)
ಚೆನ್ನೈ : ನಟ ಧನುಷ್ ಹಾಗೂ ನಟ ವಿಜಯ್ ಸೇತುಪತಿ ಇಬ್ಬರು ತಮಿಳು ಚಿತ್ರರಂಗದ ಪ್ರಮುಖ ನಟರು. ಇವರಿಬ್ಬರೂ ಒಟ್ಟಿಗೆ ವೆಟ್ರಿ ಮಾರನ್ ನಿರ್ದೇಶನದ ವಡಚೆನ್ನೈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ವಿಜಯ್ ಸೇತುಪತಿ ಅವರು ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಹೌದು. ವಿಜಯ್ ಸೇತುಪತಿ ಅವರು ಶೂಟಿಂಗ್ ಗಾಗಿ ಒಂದು ವಾರ ವಡಚೆನ್ನೈ ಚಿತ್ರದ ಸೆಟ್ ಹೋದಾಗ ನಟ ಧನುಷ್ ಒಂದು ದಿನವೂ ಶೂಟಿಂಗ್ ಗೆ  ಬಂದಿರಲಿಲ್ಲವಂತೆ. ಹಾಗಾಗಿ ವಿಜಯ್ ಸೇತುಪತಿ ಅವರು ಬೇಸರದಿಂದ ಚಿತ್ರತಂಡ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ ಇದೀಗ ನಟ ವಿಜಯ್ ಸೇತುಪತಿ ವೆಟ್ರಿ ಮಾರನ್ ಚಿತ್ರದಲ್ಲಿ ನಟಿಸಲಿದ್ದಾರೆ, ಈ ಚಿತ್ರದಲ್ಲಿ ನಿರ್ದೇಶಕ ಭಾರತಿ ರಾಜ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
i

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ