ತೆಲುಗು, ಕನ್ನಡದಲ್ಲಿ ಮಾತ್ರ ಯುವರತ್ನ ಬಿಡುಗಡೆಗೆ ಸ್ಪಷ್ಟನೆ ಕೊಟ್ಟ ನಿರ್ದೇಶಕರು
ಈ ಸಿನಿಮಾವನ್ನು ಕೇವಲ ಕನ್ನಡದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರ್ ಸಿನಿಮಾ ನೋಡಿ ತೆಲುಗಿಗೂ ಸೂಟ್ ಆಗಬಹುದು ಎಂದು ಆ ಭಾಷೆಯಲ್ಲೂ ರಿಲೀಸ್ ಮಾಡಲು ನಿರ್ಧರಿಸಿದರು. ಬೇರೆ ಭಾಷೆಗಳಿಗೆ ಇದು ಸೂಟ್ ಆಗುವ ಕತೆಯಲ್ಲ ಎಂದು ಎನಿಸಿತು.
ಹಾಗಾಗಿ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡಲು ನಿರ್ಧರಿಸಿದೆವು. ಮುಂದಿನ ದಿನಗಳಲ್ಲಿ ಅಂತಹ ಕತೆಯಿದ್ದರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.