ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಾರಾ ಅನುಶ್ರೀ ಗಂಡ ರೋಷನ್‌, ಹೀಗೊಂದು ಪೋಸ್ಟ್ ವೈರಲ್

Sampriya

ಭಾನುವಾರ, 14 ಸೆಪ್ಟಂಬರ್ 2025 (12:28 IST)
Photo Credit X
ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ದೊಡ್ಮನೆಗೆ ಎಂಟ್ರಿ ಕೊಡುವ ಸಂಭವನೀಯ ಅಭ್ಯರ್ಥಿಗಳ ಲಿಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಈ ನಡುವೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಪತಿ ರೋಷನ್ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆಂಬ  ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇನ್ನೂ ಜೀ ಕನ್ನಡದಲ್ಲಿ ಶನಿವಾರ ಪ್ರಸಾರವಾದ ಮಹಾನಟಿ ಕಾರ್ಯಕ್ರಮದಲ್ಲಿ ಅನುಶ್ರೀಗೆ ಮಡಿಲು ತುಂಬುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಪತಿ ರೋಷನ್‌ರನ್ನು ಅನುಶ್ರೀ ಮಿಸ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಮದುವೆ ಬ್ಯುಸಿಯಲ್ಲಿ ರೋಷನ್ ತಮ್ಮ ಬಿಸಿನೆಸ್ ಕಡೆ ಹೆಚ್ಚು ಗಮನಕೊಡಲು ಆಗಲಿಲ್ಲ. ಹಾಗಾಗಿ ಅವರು ವೇದಿಕೆಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದರು. ಹೀಗಿರುವಾಗ ರೋಷನ್ ಅವರು ಬಿಗ್‌ಬಾಸ್ ಮನೆಗೆ ಹೋಗುವುದು ಎಷ್ಟು ಸತ್ಯ ಎಂದು ತಿಳಿದುಬರಬೇಕಿದೆ.

ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಹೀಗಿದೆ: 

ಕೊಡಗಿನ ಹುಡುಗ ಅನುಶ್ರೀ ಗಂಡ ರೋಷನ್ ಅವರು ಬಿಗ್ ಬಾಸ್ ಮನೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇತ್ತೀಚೆಗೆ ಮದುವೆಯಾದ ಈ ಜೋಡಿ ದೇಶ ವಿದೇಶಗಳನ್ನು‌‌ ಸುತ್ತಾಡುವ ಬದಲು ಇದೀಗ ತಮ್ಮತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಇದೀಗ ಬಿಗ್ ಬಾಸ್ ಮನೆ ಕಡೆ ಅನುಶ್ರೀ ಗಂಡ ರೋಷನ್ ಅವರು ಮುಖ ಮಾಡಿದ್ದಾರೆ ಎಂಬ ಗುಸುಗುಸು ಎದ್ದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ