ನಟ ದರ್ಶನ್ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ರಕ್ಷಿತಾ ಪ್ರೇಮ್, ಪ್ರೇಮ್, ಧನ್ವೀರ್ ಗೌಡ, ತರುಣ್ ಸುಧೀರ್, ಸಾಧು ಕೋಕಿಲ, ವಿನೋದ್ ರಾಜ್ ಸೇರಿದಂತೆ ಅನೇಕರು ಈಗಾಗಲೇ ಅನೇಕರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಹೋಗಿದ್ದಾರೆ. ಅವರ ಜೊತೆಗೆ ರಾಜಕೀಯ ಕ್ಷೇತ್ರದ ಅವರ ಆಪ್ತರೂ ಬಂದು ಹೋಗಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ನಾಯಕ ಸಚ್ಚಿದಾನಂದ ದರ್ಶನ್ ರನ್ನು ಭೇಟಿ ಮಾಡಿದ್ದಾರೆ. ಇದೀಗ ಸುಮಲತಾ ಕೂಡಾ ಮುಂದೆ ದರ್ಶನ್ ಭೇಟಿಗೆ ಬರಬಹುದೇ ಎಂದು ಮಾಧ್ಯಮಗಳು ಅವರನ್ನು ಪ್ರಶ್ನೆ ಮಾಡಿವೆ. ಈ ವೇಳೆ ಮಾತನಾಡಿದ ಅವರು ಯಾರೇ ಆಗಲಿ ಜೈಲಿನಲ್ಲಿ ಅವರನ್ನು ನೋಡಲು ಕಷ್ಟವಾಗುತ್ತದೆ. ಹೀಗಾಗಿ ಸುಮಲತಾ ಮೇಡಂ ಬಂದರೂ ಬರಬಹುದು, ಬರದೆಯೂ ಇರಬಹುದು ಎಂದಿದ್ದಾರೆ.
ದರ್ಶನ್ ಬಂಧನದ ಬಳಿಕ ಸುಮಲತಾ ಸಾರ್ವಜನಿಕವಾಗಿ ಒಮ್ಮೆ ಮಾತ್ರ ಕಾಣಿಸಿಕೊಂಡಿದ್ದರು. ದರ್ಶನ್ ವಿಚಾರವಾಗಿ ಮಾತನಾಡಿಲ್ಲ ಎಂದು ಟೀಕೆಗೊಳಗಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಾಕಿ ಟೀಕಾಕಾರರಿಗೆ ತಿರುಗೇಟು ನೀಡಿದ್ದರು. ಅಲ್ಲದೆ, ದರ್ಶನ್ ಕುಟುಂಬದ ಜೊತೆಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದರು. ದರ್ಶನ್ ಯಾವತ್ತಿದ್ದರೂ ನನ್ನ ದೊಡ್ಡ ಮಗನೇ ಎಂದಿದ್ದರು. ಇದೀಗ ದರ್ಶನ್ ರನ್ನು ನೋಡಲು ಸುಮಲತಾ ಜೈಲಿಗೆ ಹೋಗಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.