ಇಂದು ಚಿತ್ರದುರ್ಗ ಡಿಸಿ ವೆಂಕಟೇಶ್ ಅವರನ್ನು ಭೇಟಿಯಾದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮತ್ತು ಪತ್ನಿ ಸಹನಾ ಸರ್ಕಾರೀ ನೌಕರಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಮೊದಲು ಕಾಶೀನಾಥಯ್ಯ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅನುಕಂಪದ ಆಧಾರದಲ್ಲಿ ಸರ್ಕಾರೀ ನೌಕರಿ ಕೊಡಿಸಲು ಮನವಿ ಮಾಡಿದ್ದರು. ಈ ವೇಳೆ ಸಿಎಂ ಕೂಡಾ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರೀ ನೌಕರಿ ಕೊಡಿಸುವುದರ ಬಗ್ಗೆಭಾರೀ ಟೀಕೆ ಕೇಳಿಬಂದಿತ್ತು. ರೇಣುಕಾಸ್ವಾಮಿ ದೇಶ ಸೇವೆ ಮಾಡಿ ಸಾಯಲಿಲ್ಲ. ಆತ ಹತ್ಯೆಯಾಗಿರುವುದಕ್ಕೆ ಕುಟುಂಬದ ಬಗ್ಗೆ ಸಂತಾಪವಿದೆ. ಆದರೆ ಆತ ಕೂಡಾ ಅಮಾಯಕನೇನಲ್ಲ. ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಅಂತಹ ವ್ಯಕ್ತಿಯನ್ನು ಕೊಲೆ ಮಾಡಿರುವುದು ತಪ್ಪಿರಬಹುದು. ಆದರೆ ಅದಕ್ಕಾಗಿ ಸರ್ಕಾರೀ ನೌಕರಿ ಕೊಡುವುದು ಯಾಕೆ? ಇದರ ಬದಲು ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಇಲ್ಲವೇ ಬೇರೆ ಎಷ್ಟೋ ಕಾರಣಗಳಿಗೆ ಸಾವನ್ನಪ್ಪಿರುವ ಕುಟುಂಬಗಳಿಗೆ ಸಹಾಯ ಮಾಡಿ. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸರ್ಕಾರೀ ನೌಕರಿ ಕೊಟ್ಟರೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ. ಬೇಕಿದ್ದರೆ ಅವರಿಗೆ ಧನ ಸಹಾಯ ಮಾಡಲಿ ಸಾಕು ಎಂದು ಸಾರ್ವಜನಿಕರಿಂದ ಅಭಿಪ್ರಾಯ ಕೇಳಿಬಂದಿತ್ತು.